|
Article in other languages:
|
ಧರ್ಮವು ಒಂದು ಮಾನವ ಸಮುದಾಯಯು ಹೊಂದಿರುವ ನಂಬಿಕೆಗಳು, ಪಾಲಿಸುವ ಶಾಸ್ತ್ರಗಳು, ಹಾಗು ಈ ನಂಬಿಕೆ ಮತ್ತು ಶಾಸ್ತ್ರಗಳಿಗೆ ಸಂಬಂಧಿಸಿದ ಪುರಾಣ - ಪರಂಪರೆಗಳು. ಧರ್ಮವು ಮಾನವನ ಆಧ್ಯಾತ್ಮಿಕ ಹಾಗು ಸಾಮಾಜಿಕ ಅಗತ್ಯಗಳನ್ನು ನೀಗಿಸುವ ಒಂದು ಮಾರ್ಗ.
ವಿವಿಧ ದೃಷ್ಟಿಕೋನಗಳುಹಿಂದೂ ಧರ್ಮಹಿಂದೂ ಧರ್ಮದ ಪ್ರಕಾರ ಧರ್ಮವು ಪ್ರತಿಯೊಬ್ಬ ಮನುಷ್ಯನ ಮೌಲ್ಯ, ಕರ್ತವ್ಯ ಹಾಗು ಸಮಾಜಿಕ ಜವಾಬ್ದಾರಿಯೆಂದು ಅರ್ಥೈಸಬಹುದಾಗಿದೆ. ಜೈನ ಧರ್ಮಜೈನ ಧರ್ಮದ ಪ್ರಕಾರ ಧರ್ಮವು ಸಕಲ ಜೀವಿಗಳಿಗೂ ತಮ್ಮ ಗತಿಯಲ್ಲಿ ಜೀವಿಸಬಹುದಾದ ಉನ್ನತ ಮೌಲ್ಯ ಮತ್ತು ರೀತಿ-ನೀತಿಗಳ ಸಾರವಾಗಿದೆ.ಧರ್ಮವು ಮೋಕ್ಷದ ರಹದಾರಿಯಾಗಿದೆ. ಧರ್ಮದ ಟೀಕೆಹಲವಾರು ಶತಮಾನಗಳಿಂದ ಧರ್ಮವನ್ನು ಮೂಢನಂಬಿಕೆಯೆಂದು ಹಲವಾರು ಮಹಾನುಭಾವರು ತೆಗಳಿರುವರು. ಉದಾಹರಣೆಗೆ, ಭಾರತದಲ್ಲೆ ಹುಟ್ಟಿ ಬೆಳೆದ ಗೌತಮ ಬುದ್ಧ ಹಿಂದು ಧರ್ಮವನ್ನು ಜಾತಿ ಪದ್ಧತಿಯನ್ನು ಹಾಗು ವೇದಗಳ ಮೇಲಿನ ಮೂಢನಂಬಿಕೆಯನ್ನು ಕುರಿತು ಟೀಕಿಸಿರುವನು. ಹೀಗೆ ಪಾಶ್ಛಾತ್ಯ ದೇಶಗಳಲ್ಲಿ ಕೂಡ ಹಲವಾರು ಬುದ್ಧಿಜೀವಿಗಳು ಕ್ರೈಸ್ತ ಧರ್ಮವನ್ನು ಹಾಗು ಇಸ್ಲಾಂ ಧರ್ಮವನ್ನು ಟೀಕಿಸಿರುವರು. ಇವರ ಮುಖ್ಯ ವಾದವೇನೆಂದರೆ: ಧರ್ಮವು ಸಾಮನ್ಯವಾಗಿ ಓರ್ವ ಅಥವ ಹಲವಾರು ದೇವರುಗಳ ಮೇಲೆ ನಿಂತಿರುವುದರಿಂದ, ಈ ದೇವರುಗಳಿಗೆ ಯಾವ ಪ್ರತ್ಯಕ್ಷ ಪ್ರಮಾಣವೂ ಇಲ್ಲವಾದ್ದರಿಂದ ಧರ್ಮವು ಅಸತ್ಯದ ಮೇಲೆ ನಿಂತಿದೆ. ಆದ್ದರಿಂದ ಸಮಾಜವು ಧರ್ಮದ ಮೇಲೆ ನಿಂತು ಬೆಳೆಯಲಾರದು ಹಾಗು ಉದ್ಧಾರವಾಗಲಾರದು. ಇಷ್ಟೆ ಅಲ್ಲದೆ ಧರ್ಮದ ಹೆಸರಿನಲ್ಲಿ ಜಗತ್ತಿನ ಹಲವಾರು ದೇಶಗಳಲ್ಲಿ ಅಪಾರ ಕ್ರೂರತೆ ಹಾಗು ಅನ್ಯಾಯ ನಡಯುವವು. ಇವೆಲ್ಲ ಹಾಗು ಹಲವಾರು ಇತರ ಕಾರಣಗಳಿಂದ ಮಾನವ ಜಾತಿಯು ಧರ್ಮವನ್ನು ಬಿಟ್ಟು ನಿಂತರೆ ಬಹಳ ಉತ್ತಮವೆಂದು ವಾದ ಮಾಡುವರು. Questions for article: ಗೌತಮ ಬುದ್ಧ |
This article is from Wikipedia. All text is available under the terms of the GNU Free Documentation License.
IHS Europe: Infrared Heating Systems for Home and Business.